ತುರ್ಕಿಸ್ತಾನ-
	ಮಧ್ಯ ಏಷ್ಯದ ಒಂದು ಪ್ರದೇಶ, ಭಾಗಶ: ಸೋವಿಯತ್ ಒಕ್ಕೂಟದಲ್ಲೂ ಭಾಗಶ: ಚೀನೀ ಜನತಾ ಗಣರಾಜ್ಯದಲ್ಲೂ ಇದೆ.  ಪಶ್ಚಿಮ ಭಾಗ ರಷ್ಯನ್ ತುರ್ಕಿಸ್ತಾನ ಅಥವಾ ಪಶ್ಚಿಮ ತುರ್ಕಿಸ್ತಾನ. ಇದು ರಾಜಕೀಯವಾಗಿ ತುರ್ಕ್‍ಮೆನ್, ಉeóïಬೆಕ್, ತಾಜಿಕ್, ಕಿರ್ಗಿeóï ಮತ್ತು ಕeóÁಕ್ ಸೋವಿಯತ್ ಸಮಾಜವಾದಿ ಗಣರಾಜ್ಯಗಳಲ್ಲಿ ಹಂಚಿಕೆಯಾಗಿದೆ.  ಪೂರ್ವ ತುರ್ಕಿಸ್ತಾನ ಅಥವಾ ಚೀನ ತುರ್ಕಿಸ್ತಾನ ಚೀನದ ಷಂಜೀಯಾಂಗ್ ವೀಗುರ್ ಸ್ವಯಮಾಡಳಿತ ಪ್ರಾಂತ್ಯದ ಭಾಗ.  ಈಶಾನ್ಯ ಆಫ್ಘಾನಿಸ್ತಾನದ ಒಂದು ಭಾಗವನ್ನೂ ಈ ಪ್ರದೇಶದಲ್ಲಿ ಸೇರಿದ್ದೆಂದು ಪರಿಗಣಿಸುವುದುಂಟು.  ಐತಿಹಾಸಿಕವಾಗಿ ಈ ಪ್ರದೇಶವನ್ನು ಮೂರು ಭೌಗೋಳಿಕ ವಲಯಗಳಾಗಿ ವಿಂಗಡಿಸಬಹುದು.  ಆಮೂ ದಾರ್ಯ ನದಿಗೂ ಸಿರ್ ದಾರ್ಯ ನದಿಗೂ ನಡುವೆ ಇರುವುದು ಒಂದು ವಲಯ.  ಇಸ್ಲಾಮಿ ಆಡಳಿತ ಕಾಲದಲ್ಲಿ ಇದಕ್ಕೆ ಮಾ ವರಾ ಆನ್-ನಹ್ರ್ ಎಂದು ಹೆಸರಿತ್ತು.  ಆಮೂ ದಾರ್ಯ ನದಿಯನ್ನು ಗ್ರೀಕರು ಆಕ್ಸಸ್ ಎಂದೂ ಅರಬರು ಜೈ ಹೂನ್ ಎಂದೂ ಕರೆಯುತ್ತಿದ್ದರು.  ಸಿರ್ ದಾರ್ಯಕ್ಕೆ ಗ್ರೀಕ್ ಮತ್ತು ಅರಬ್ ಹೆಸರುಗಳು ಅನುಕ್ರಮವಾಗಿ ಚಾಕ್ಸಾರ್ಟಿಸ್ ಮತ್ತು ಸೈ ಹೂನ್. ಈ ವಲಯ ಅರೆಮರುಭೂಮಿ.  ಹಿಂದೆ ಇಲ್ಲಿ ಓಯಸಿಸ್ಸುಗಳ ಬಳಿಯಲ್ಲಿ ಮತ್ತು ನದೀ ದಂಡೆಗಳಲ್ಲಿ ಮಾತ್ರ ವ್ಯವಸಾಯವಿತ್ತು.  ಈಗ ನೀರಾವರಿ ಅಭಿವೃದ್ಧಿಯಾಗಿದೆ.  ಸಿರ್ ದಾರ್ಯಕ್ಕೆ ಈಶಾನ್ಯದಲ್ಲಿ ಹಾಗೂ ಟಿಯೆನ್ ಷಾನ್ ಪರ್ವತಶ್ರೇಣಿಯ ಉತ್ತರದಲ್ಲಿ ಆಲ್ಟಾಯ್‍ನ ಅಡಿಬೆಟ್ಟಗಳ ವರೆಗೆ ಹಬ್ಬಿರುವುದು ಎರಡನೆಯ ವಲಯ.  ಇದು ಒಳ್ಳೆಯ ಫಲವತ್ತಾದ ಮೇವು ನೆಲ.  ಸಂಚಾರಿ  ತುರುಗಾಹಿಗಳಿಗೆ ಅನುಕೂಲಕರ.  ಈ ವಲಯದ ದಕ್ಷಿಣದಲ್ಲಿ ಟಿಯೆನ್‍ಷಾನ್ ಪರ್ವತವೂ ಉತ್ತರದಲ್ಲಿ ಸೈಬೀರಿಯನ್ ಅರಣ್ಯವಲಯವೂ ಇದೆ. ಪಶ್ಚಿಮದಲ್ಲಿ ಪೂರ್ವ ಯುರೇಷಿಯನ್ ಸ್ಟೆಪ್ (ಹುಲ್ಲುಗಾವಲು) ವಲಯ ಉಕ್ರೇನಿನ ವರೆಗೆ ಹಬ್ಬಿದೆ.  ಇದು ಈ ವಲಯದ ಮುಂದುವರಿದ ಭಾಗವೆನ್ನಬಹುದು.  ಆಲ್ಟಾಯ್ ಮತ್ತು ಟಿಯೆನ್ ಷಾನ್ ನಡುವೆ ಹಬ್ಬಿರುವ ಪರ್ವತ ಶ್ರೇಣಿಯ ಅಡಿಬೆಟ್ಟಗಳು ಈ ವಲಯದ ಪೂರ್ವದ ಎಲ್ಲೆ. ಮೂರನೆಯ ವಲಯ ಕಾಷ್ಗಾರಿಯ.  ಇಲ್ಲಿ ಟಕ್ಲ ಮಕಾನ್ ಮರಭೂಮಿ ಹಬ್ಬಿದೆ.  ಇದರ ಉತ್ತರದಲ್ಲಿ ಟಿಯೆನ್ ಷಾನ್, ಪಶ್ಚಿಮದಲ್ಲಿ ಷಾಮಿರ್, ದಕ್ಷಿಣದಲ್ಲಿ ಕೂನ್‍ಲೂನ್ ಪರ್ವತ ಇವೆ.  ಮರುಭೂಮಿಯ ಅಂಚಿನ ಉನ್ನತ ಪ್ರದೇಶಗಳಿಗೂ ಮರುಭೂಮಿಯ ನಡುವಿನ ಓಯಸಿಸ್‍ಗಳಿಗೂ ಜನವಸತಿ ಸೀಮಿತವಾಗಿದೆ.

ಪರ್ವತಗಳಿಂದ ಆವೃತವಾಗಿ, ಮರುಭೂಮಿ - ಅರೆಭೂಮಿಗಳಿಂದ ಕೂಡಿದ ತುರ್ಕಿಸ್ತಾನ್ ಪ್ರದೇಶದ ಅಲೆಮಾರಿ ಜನರು ಪ್ರಾಚೀನ ಇರಾನಿಯನ್, ಭಾರತೀಯ ಹಾಗೂ ಚೀನೀ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದವರು.  ಈ ಪ್ರದೇಶದ ನಡುವೆ ಕಾರವಾನ್ ಹರಿ ಹರಿಯುತ್ತಿದ್ದರುದರಿಂದಾಗಿ ವೈವಿಧ್ಯಮಯ ಸಾಂಸ್ಕøತಿಕ ಹಾಗೂ ವಾಣಿಜ್ಯ ವಿನಿಮಯಕ್ಕೆ ಇದು ನಿಮಿತ್ತವಾಯಿತು.  

ಕ್ರಿ. ಪೂ. 2ನೆಯ ಶತಮಾನದಲ್ಲಿ ಮಂಗೋಲಿಯದ ಕಡೆಯಿಂದ ಬಂದ ಹೂಣರು ಕಾಷ್ಗಾರಿಯ ಅಥವಾ ಪೂರ್ವ ತುರ್ಕಿಸ್ತಾನವನ್ನು ಹಿಡಿದರು.  ಆಗ್ಗೆ ಆ ಪ್ರದೇಶದ ಆಗ್ನೇಯ ಭಾಗದಲ್ಲಿ ತೂಕಾರಿಯನರೂ ಉತ್ತರದಲ್ಲಿ ಹೂಣರಿಗಿಂತ ಮೊದಲು ಪಶ್ಚಿಮ ತುರ್ಕಿಸ್ತಾನಕ್ಕೆ ವಲಸೆ ಬಂದ ಯೂಜಿಯನರೂ ಇದ್ದರು. ಆಗ್ಗೆ ಪಶ್ಚಿಮ ತುರ್ಕಿಸ್ಥಾನ ಸಾಗ್ಡಿಯಾನ ಮತ್ತು ಬ್ಯಾಕ್ಟ್ರಿಯ ಎನಿಸಿಕೊಂಡಿತ್ತು.  ಹೂಣರು ಸಾಮ್ರಾಜ್ಯ ನಾಶವಾದ ಮೇಲೆ ಕಾಷ್ಗಾರಿಯವನ್ನು ಚೀನೀಯರು ಆಕ್ರಮಿಸಿದರು.  ಉತ್ತರದ ಹುಲ್ಲುಗಾವಲು ಪ್ರದೇಶವನ್ನು ಹೂಣರು ಆಕ್ರಮಿಸಿಕೊಂಡರು.  ಕ್ರಿ. ಶ. 400 ರ ವೇಳೆಗೆ ಬಿಳಿಯ ಹೂಣರು ಸಾಗ್ಡಿಯಾನ ಮತ್ತು ಬ್ಯಾಕ್ಟ್ರಿಯದಲ್ಲಿ ಒಂದು ರಾಜ್ಯವನ್ನು ಸ್ಥಾಪಿಸಿ ಪರ್ಷಿಯದ ಸ್ಯಸಾನಿಡೀ ವಂಶದ ಅರಸರ ವಿರುದ್ಧ ತಮ್ಮ ಸ್ಥಾನವನ್ನು ರಕ್ಷಿಸಿಕೊಂಡಿದ್ದರು. ಆದರೆ 565ರಲ್ಲಿ ಅವರು ಒಂದು ಕಡೆ ಪರ್ಷಿಯದ, ಮತ್ತೊಂದು ಕಡೆ ಮಧ್ಯ ಏಷ್ಯದ ತುರ್ಕರ ಪ್ರಭಾವಕ್ಕೆ ಒಳಗಾಗಿ ಇವರ ರಾಜ್ಯ ಒಡೆಯಿತು. ತುರ್ಕರು ಆಕ್ಸಸ್ ನದಿಯ ಪೂರ್ವ ದಂಡೆಯ ಪ್ರದೇಶವಾದ ಟ್ರಾನ್ಸ್ ಆಕ್ಸಿಯಾನದ ಸ್ವಾಮ್ಯ ಪಡೆದರು. ಆದರೆ 8ನೆಯ ಶತಮಾನದಲ್ಲಿ ಅರಬರು ಟ್ರಾನ್ಸ್ ಆಕ್ಸಿಯಾನವನ್ನು ಗೆದ್ದರು. 9 ಮತ್ತು 10ನೆಯ ಶತಮಾನದಲ್ಲಿ ಪರ್ಷಿಯದ ಸಾಮಾನಿಡ್ ವಂಶಜರ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶ ಅತ್ಯುನ್ನತ ಸ್ಥಿತಿ ತಲುಪಿತ್ತು. ಅದೇ ಕಾಲದಲ್ಲಿ ಪೂರ್ವ ತುರ್ಕಿಸ್ತಾನವನ್ನು ಮಂಗೋಲಿಯದ ತುರ್ಕರು ಆಕ್ರಮಿಸಿದರು. ಮೊದಲ ಬಾರಿಗೆ ತುರ್ಕರ ಸಂಖ್ಯೆ ಹೆಚ್ಚಿತು. ಚೀನೀಯರ ಮತ್ತು ನೆಸ್ಟೋನಿಯನ್ನರ ಪ್ರಭಾವದಿಂದ ಉತ್ತಮ ಸಂಸ್ಕøತಿಯನ್ನು ಬೆಳಿಸಿಕೊಂಡಿದ್ದ ಈ ತುರ್ಕರು ಲಿಪಿಯಲ್ಲಿ ಕೆಲವು ಸುಧಾರಣೆಗಳನ್ನು ತಂದರು. 10ನೆಯ ಶತಮಾನದಲ್ಲಿ ಪ್ರವರ್ಧಿಸಿದ ಘೂಸ್ ಜನರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ಹುಲ್ಲುಗಾವಲು ಪ್ರದೇಶದಲ್ಲಿ ನೆಲಸಿದಲ್ಲದೆ, ಸೆಲ್ಜುಕ್ ವಂಶಜರ ನಾಯಕತ್ವದಲ್ಲಿ ಪರ್ಷಿಯ, ಇರಾಕ್. ಏಷ್ಯ ಮೈನರ್‍ಗಳನ್ನು ಗೆದ್ದರು. ಇವರ ಇನ್ನೊಂದು ತಂಡ ಖಾರಾ ಖಾನ್ ನಾಯಕತ್ವದಲ್ಲಿ ಕಾಷ್ಗಾರಿಯವನ್ನು ಪ್ರವೇಶಿಸಿ 999ರಲ್ಲಿ ಟ್ರಾನ್ಸ್ ಆಕ್ಸಿಯಾನವನ್ನು ಆಕ್ರಮಿಸಿಕೊಂಡಿತು., ಪಶ್ಚಿಮ ತುರ್ಕಿಸ್ತಾನದವರು ಕ್ರಮೇಣ ಪೂರ್ವ ತುರ್ಕಿಸ್ತಾನದ ತಮ್ಮ ದಾಯದಿಗಳೊಡನೆ ಸಂಬಂಧ ಕಳೆದುಕೊಂಡು ಸೆಲ್ಜುಕರ ಸಾರ್ವಭೌಮತ್ವವನ್ನು ಒಪ್ಪಬೇಕಾಯಿತು. ಮಂಗೋಲ್ ಬುಡಕಟ್ಟಿನ ಕೆಪೈಟರು 1141ರಲ್ಲಿ ಸಾಮರ್‍ಖಂಡ್ ಹೊರವಲಯದಲ್ಲಿ ನಡೆದ ಯುದ್ದದಲ್ಲಿ ಸೆಲ್ಜುಕರನ್ನು ಸೋಲಿಸಿ, ಟ್ರಾನ್ಸ್ ಆಕ್ಸಿಯಾನದ ಮೇಲಿನ ಅವರ ಆಳ್ವಿಕೆಯನ್ನು ಕೊನೆಗೊಳಿಸಿದರು; ಖಾರಾ ಖಾನ್ ವಂಶಜರನ್ನು ಕಾಷ್ಗಾರಿಯದಿಂದ ಓಡಿಸಿದರು. ತುರ್ಕಿಸ್ತಾನ ಮತ್ತು ಇತರ ಕಡೆಗಳಲ್ಲಿ ರಾಜಕೀಯ ರಂಗದಲ್ಲಿ ಉಂಟಾದ ಗೊಂದಲವನ್ನು ಕೊನೆಗಾಣಿಸಿ ಮಂಗೋಲಿಯದ ಜೆಂಗಿಸ್ ಖಾನ್ 1218ರಲ್ಲಿ ಕಾಷ್ಗಾರಿಯವನ್ನೂ 1220ರಲ್ಲಿ ಟ್ರಾನ್ಸ್‍ಆಕ್ಸಿಯಾನವನ್ನೂ ವಶಪಡಿಸಿಕೊಂಡ. ಅವನು ತನ್ನ ಎರಡನೆಯ ಮಗನಾದ ಚಗ್‍ತಾಯ್ ಖಾನನಿಗೆ ತುರ್ಕಿಸ್ತಾನವನ್ನು ವಹಿಸಿಕೊಟ್ಟ ಖಾನನ ವಂಶಜರಲ್ಲಿ ವಾದವಿವಾದಗಳುಂಟಾಗಿ ಟ್ರಾನ್ಸ್ ಆಕ್ಸಿಯಾನವನ್ನು ಮತ್ತು ಮೊಗಲಿಸ್ತಾನ್ (ಪೂರ್ವ ತುರ್ಕಿಸ್ತಾನ) ಖಾನರೆಂದು ಇಬ್ಭಾಗವಾಗಿ ಒಡೆದು ಹೋದರು. ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. 1330ರಲ್ಲಿ ತೈಮೂರ್ ಟ್ರಾನ್ಸ್ ಆಕ್ಸಿಯಾನ ಮತ್ತು ಸಾಮರ್‍ಖಂಡದ ಸ್ವಾಮ್ಯವನ್ನು ಪಡೆದ. ಆದರೆ ಅವನ ತರುವಾಯ ಅವನ ಮಕ್ಕಳಲ್ಲಿ ವ್ಯಾಜ್ಯಗಳು ಹುಟ್ಟಿದವು. ಇದೇ ಸಂದರ್ಭವನ್ನು ಸಾಧಿಸಿ ಉಸ್‍ಬೇಗರು ಅದರ ಉತ್ತರ ಭಾಗದಲ್ಲಿ ಸ್ಥಾನ ಪಡೆದರು. 1501ರಲ್ಲಿ ಅವರ ಮುಖ್ಯಸ್ಥ  ಷೈಭನಿ ಖಾನ ಬಾಬರನಿಂದ ಟ್ರಾನ್ಸ್ ಆಕ್ಸಿಯಾನವನ್ನು ಕಿತ್ತುಕೊಂಡು ತೈಮೂರ್ ವಂಶಜರ ಆಳ್ವಿಕೆಯನ್ನು ಮುಕ್ತಾಯಗೊಳಿಸಿದ. ಇವನ ವಂಶಜರು ಸ್ವಲ್ಪ ಕಾಲದ ಅನಂತರ ಇದನ್ನು ಆಷ್ಟ್ರಾಖಾನನ ವಂಶಜರಿಗೆ ಬಿಟ್ಟುಕೊಡಬೇಕಾಯಿತು.  1740ರಲ್ಲಿ ಇದು ನಾದಿರ್‍ಶಾಹನ ವಶಕ್ಕೆ ಬಂತು. ಮುಂದೆ ಒಂದು ಶತಮಾನ ಕಾಲ ಕಚ್ಚಾಡುತ್ತಿದ್ದ ಬುಖಾರ, ಖೀವ್, ಖೋಕಂಡ್‍ಗಳ ಆಡಳಿತಗಳು ರಷ್ಯದ ಆಕ್ರಮಣಕ್ಕೆ ತುತ್ತಾದವು. ಅದು 1865ರಲ್ಲಿ ತಾಷ್ಕೆಂಟನ್ನು ಜಯಿಸಿ ರಷ್ಯನ್ ತುರ್ಕಿಸ್ತಾನ್ ಪ್ರಾಂತ್ಯವನ್ನು ರೂಪಿಸಿತು; ಬುಖಾರ ಮತ್ತು ಖೀವ್ ಪ್ರದೇಶಗಳ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿತು. 1917ರ ಬೋಲ್ಷೆವಿಕ್ ಕ್ರಾಂತಿಯ ತರುವಾಯ ಬುಖಾರ ಮತ್ತು ಖೀವ್‍ಗಳನ್ನು ಸೋವಿಯತ್ ಗಣರಾಜ್ಯಗಳನ್ನಾಗಿ ಪರಿವರ್ತಿಸಲಾಯಿತು. ಉಳಿದ ಪ್ರದೇಶವನ್ನು ತುರ್ಕಿಸ್ತಾನದಲ್ಲಿ ಸೇರಿಸಲಾಯಿತು. 1922ರಲ್ಲಿ ನಡೆದ ಗಲಭೆಗಳ ಅನಂತರ ಪಶ್ಚಿಮ ತುರ್ಕಿಸ್ತಾನದಲ್ಲಿ ಆಯಾ ಸ್ಥಳೀಯ ವಿಭಿನ್ನತೆಗಳಿಗೆ ಅನುಗುಣವಾಗಿ ಪ್ರತ್ಯೇಕ ಗಣರಾಜ್ಯಗಳನ್ನು ರೂಪಿಸಲಾಯಿತು. 

ಪೂರ್ವ ತುರ್ಕಿಸ್ತಾನದಲ್ಲಿ ಚಗ್‍ತಾಯ್ ಖಾನನ ಅವನತಿಯಾಗುತ್ತಿದ್ದಂತೆ ಅಲ್ಲಿಯ ಕೆಲವು ಭಾಗಗಳು ಮಂಗೋಲಿಯರ ವಶಕ್ಕೆ ಹೋದವು. ಇತರ ಭಾಗಗಳು ಖೋಜûರರ ಕೈಯಲ್ಲಿದ್ದವು. ಮಾಂಚೂ ಚಕ್ರವರ್ತಿಗಳು ಮಂಗೋಲಿಯವರ ಶಕ್ತಿಯನ್ನು ಮುರಿದ ಅನಂತರ ಇಡೀ ಪೂರ್ವ ತುರ್ಕಿಸ್ತಾನದ ಮೇಲೆ ಚೀನೀ ಆಡಳಿತವನ್ನು ಸ್ಥಾಪಿಸಲಾಯಿತು (1762). ಅಲ್ಲಿಯ ಚೀನೀ ಮುಸ್ಲಿಮರು 19ನೆಯ ಶತಮಾನದಲ್ಲಿ ಆಗಾಗ್ಗೆ ದಂಗೆಯೇಳುತ್ತಿದ್ದರು. ಕಾಷ್ಗಾರಿಯದ ಯಾಕುಬ್ ಭೇಯ ದಂಗೆ ಅತ್ಯುಗ್ರವಾಗಿತ್ತು. ಚೀನೀ ಪ್ರಭುತ್ವ ಪುನಃ ಸ್ಥಾಪಿತವಾದ ಅನಂತರ ಪೂರ್ವ ತುರ್ಕಿಸ್ತಾನಕ್ಕೆ ಪ್ರಾಂತೀಯ ಸ್ಥಾನ ನೀಡಿ ಷಿಂಜೀಯಾಂಗ್ (ನೂತನ ರಾಜ್ಯ) ಎಂದು ಹೆಸರಿಡಲಾಯ್ತು.  ಸೇಂಟ್ ಪೀಟರ್ಸ್‍ಬರ್ಗ್ ಒಪ್ಪಂದದಿಂದ (1881) ರಷ್ಯದೊಡನೆ ಗಡಿ ವಿವಾದ ಬಗೆಹರಿಯಿತು.
                                                                       (ಜಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ